/newsfirstlive-kannada/media/post_attachments/wp-content/uploads/2024/07/Shivarajkumar-Birthday.jpg)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಹುಟ್ಟುಹಬ್ಬಕ್ಕೂ ಮುಂಚೆಯೇ ತಮ್ಮ ಅಭಿಮಾನಿ ದೇವರುಗಳಿಗೆ ಪ್ರೇಮದ ಕಾಣಿಕೆ ಕೊಡಲು ನಟ ಶಿವರಾಜ್ ಕುಮಾರ್ ಸಜ್ಜಾಗಿದ್ದಾರೆ. ಖುದ್ದು ಶಿವರಾಜ್ ಕುಮಾರ್ ಅವರೇ ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಅಕೌಂಟ್ನಿಂದ ನನಗೂ ಕೆಟ್ಟ ಮೆಸೇಜ್.. ದರ್ಶನ್ ಬಗ್ಗೆ ನಟಿ ಮಮತಾ ರಾವತ್ ಏನಂದ್ರು?
ಇದೇ ಜುಲೈ 12ರಂದು ಶಿವರಾಜ್ ಕುಮಾರ್ ಅವರ 62ನೇ ಹುಟ್ಟುಹಬ್ಬ. ಶಿವಣ್ಣನ ಬರ್ತ್ಡೇ ಅನ್ನ ಅದ್ಧೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳಿಗೂ ಗಿಫ್ಟ್ ಅಂದ್ರೆ ಪ್ರೇಮದ ಕಾಣಿಕೆ ಕೊಡಲು ಶಿವಣ್ಣ ಕೂಡ ಸಜ್ಜಾಗಿದ್ದಾರೆ.
ಈ ಬಾರಿ ಹುಟ್ಟುಹಬ್ಬದ ದಿನ ಶಿವಣ್ಣನಿಂದ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ಸಿಗಲಿದೆ. ಈ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ಅವರು, ಎಲ್ಲರಿಗೂ ನಮಸ್ಕಾರ. ಹುಟ್ಟುಹಬ್ಬ ಅನ್ನೋದೇ ಒಂದು ಗಿಫ್ಟ್. ಆ ಗಿಫ್ಟ್ ಅನ್ನ ತಂದೆ, ತಾಯಿಗಳಿಂದ ನಾವು ಪಡೆಯುತ್ತೇವೆ. ನಾನು ರಾಜ್ಕುಮಾರ್, ಪಾರ್ವತಮ್ಮನವಂತಹ ತಂದೆ, ತಾಯಿಯನ್ನು ಪಡೆದಿರೋದು ದೊಡ್ಡ ಗಿಫ್ಟ್ ಆಗಿದೆ. ಇದಾದ ಮೇಲೆ ನಮ್ಮ ಕರಿಯರ್ ಅವರೇ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಸಾಕಷ್ಟು ಜನರ ಆಶೀರ್ವಾದ ಇದೆ. ಅದೇ ದೊಡ್ಡದು. ಅಭಿಮಾನಿಗಳು ಬರ್ತ್ಡೇ ದಿನ ಮನೆಗೆ ಬಂದು ಕೇಕ್ ಕಟ್ ಮಾಡಿಸುತ್ತೀರಾ. ಫೋಟೋ ತೆಗೆದುಕೊಂಡು ಸಂಭ್ರಮ ಪಡುತ್ತೀರಾ. ಈ ಬಾರಿ ನಾನು ನಿಮಗೆ ಬ್ಯೂಟಿಫುಲ್ ಗಿಫ್ಟ್ ಕೊಡುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
Eagerly waiting for the first look ⚡#Shivanna#Shivanna131@NimmaShivanna@nimmaupendra
pic.twitter.com/FARDqkjW5l— Karthi (@karthi790)
Eagerly waiting for the first look ⚡#Shivanna#Shivanna131@NimmaShivanna@nimmaupendra
pic.twitter.com/FARDqkjW5l— Karthi (@karthi790) July 10, 2024
">July 10, 2024
ಏನದು ಶಿವಣ್ಣನ ಗಿಫ್ಟ್?
ಬರ್ತ್ ಡೇ ದಿನ ಶಿವರಾಜ್ಕುಮಾರ್ ಅಭಿನಯದ 45 ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದೆ. ಇದು ಸಖತ್ ಸ್ಪೆಷಲ್ ಅಂತ ಶಿವಣ್ಣ ಹೇಳಿದ್ದಾರೆ. ಯಾಕಂದ್ರೆ 45 ಸಿನಿಮಾ ನನಗೆ ಫೇವರೆಟ್ ಆಗಿದೆ. ಅರ್ಜುನ್ ಜನ್ಯ ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ. ಶೆಟ್ಟಿ ಕೂಡ ಇದ್ದಾರೆ. ಈ ಸಿನಿಮಾ ಇಂಡಿಯನ್ ಸಿನಿಮಾದಲ್ಲೇ ಬೆಸ್ಟ್ ಸಿನಿಮಾ ಆಗಿರುತ್ತೆ. ಜುಲೈ 12ರಂದು 45 ಸಿನಿಮಾದಲ್ಲಿ ಅಭಿನಯಿಸಿರುವ ಶಿವರಾಜ್ಕುಮಾರ್ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ